Posts

ಹಳ್ಳಿಗೆ ಬೇಕಾದುದು ಡಿಗ್ರಿ ಅಲ್ಲ — ಕೌಶಲ್ಯದ ಪಟ್ಟು..!-- ನರೇಂದ್ರ ರೈ ದೇರ್ಲ

ಹಳ್ಳಿಗೆ ಬೇಕಾದುದು ಡಿಗ್ರಿ ಅಲ್ಲ — ಕೌಶಲ್ಯದ ಪಟ್ಟು..! -- ನರೇಂದ್ರ ರೈ ದೇರ್ಲ         ಇತ್ತೀಚೆಗೆ ನಮ್ಮ ಹಳ್ಳಿಗೆ ಬಂದ ಟಿವಿ ರಿಪೇರಿ ಹುಡುಗನೊಬ್ಬ ನನಗೆ ಒಂದು ದೊಡ್ಡ ಪಾಠ ಹೇಳಿಹೋಗಿದ್ದ. ಪಾಠ ಅಂದರೆ ಭಾಷಣವಲ್ಲ, ಉಪನ್ಯಾಸವಲ್ಲ. ಅವನ ಕೆಲಸ, ಓಡಾಟ, ಅವನ ದಿನಚರಿಯೇ ನನಗೆ ಗ್ರಾಮೀಣ ಉದ್ಯೋಗದ ಒಂದು ಲಾಭಕರ ಮುಖವನ್ನು ಪಾಠವಾಗಿ ಕಲಿಸಿತ್ತು.      ನಮ್ಮನೆಯ ಟಿವಿಯಲ್ಲಿ ಒಂದು ಸಣ್ಣ ತಾಂತ್ರಿಕ ದೋಷವಿತ್ತು.ಒಮ್ಮೆ ಫೋನ್ ಮಾಡಿದರೆ ನಮ್ಮ ಹಳ್ಳಿಯಲ್ಲಿ ಸುಲಭವಾಗಿ ಯಾರೊಬ್ಬರೂ  ಬರೋದು ಕಷ್ಟ. ಐದಾರು ಬಾರಿ ಕರೆ ಮಾಡಿದ ಮೇಲಷ್ಟೇ 'ಬರುತ್ತೇನೆ ಸರ್' ಅನ್ನುವ ಉತ್ತರ. ಬಂದದ್ದು ರಾತ್ರಿ ಹತ್ತು ಗಂಟೆಗೆ. ಕೈಯಲ್ಲಿ ಒಂದು ಚೀಲ, ತಲೆಗೆ ಹೆಲ್ಮೆಟ್, ಹಳೆಯ ಬೈಕ್ ಮೇಲೆ ದಿನದ ಧೂಳು ಬೇರೆ. ಒಂದೇ ನಿಮಿಷದಲ್ಲಿ ಒಂದು ಸ್ಪೇರ್ ಬದಲಿಸಿ ಟಿವಿ ಓಡಿಸಿದ. ಐದು ನೂರು ರೂಪಾಯಿ ಎಂದ. ಕೊಟ್ಟೆ.       “ಇವತ್ತಿನ ಡ್ಯೂಟಿ ಮುಗಿತಾ?” ಅಂತ ಕೇಳಿದೆ. ನಗುತ್ತಾ “ಇಲ್ಲ ಸರ್, ಇನ್ನೂ ಮೂರು ಮನೆಬಾಕಿ ಇದೆ " ಅಂದ. ನನ್ನದು ಆ ದಿನ ಹದಿಮೂರು ಮನೆ. ದಿನಕ್ಕೆ ಹದಿನೈದು ಮನೆ ಎಂದರೆ ಕನಿಷ್ಠ ಐದು ಸಾವಿರ ರೂಪಾಯಿ. ಕೆಲವೊಮ್ಮೆ ಹತ್ತು ಸಾವಿರವೂ ಆಗುತ್ತದೆ. ನಾಲ್ಕು ಸಾವಿರಕ್ಕಿಂತ ಕಡಿಮೆ ಆಗಿದ್ದೇ ಇಲ್ಲವಂತೆ. ಕೇಳಿದೆ—ಓದಿದ್ದು ಎಷ್ಟು? “ಏಳನೇ ಕ್ಲಾಸ್” ಅಂದ. ತಿಂಗಳಿಗೆ ಒಂದು ಲಕ್ಷಕ್ಕಿಂತ...

ಹೆದ್ದಾರಿಯ ವೇಗದಲ್ಲಿ ಮೌನವಾದ ಊರುಗಳು! ನರೇಂದ್ರ ರೈ ದೇರ್ಲ

ಇಂದಿನ ಅಂಕಣ  ಹೆದ್ದಾರಿಯ ವೇಗದಲ್ಲಿ ಮೌನವಾದ ಊರುಗಳು!                   ಒಂದು ಕೃಷಿ ಪ್ರಧಾನ ಹಳ್ಳಿಯನ್ನು  ಸೀಳಿ ಸಾಗುವ ರಾಷ್ಟ್ರೀಯ ಹೆದ್ದಾರಿ  ಆ ಕ್ಷಣದಿಂದಲೇ  ಭೌಗೋಳಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಆ ಊರನ್ನು ಇಬ್ಬಾಗ ಮಾಡುತ್ತದೆ. ನಕ್ಷೆಯಲ್ಲಿ ಮಾತ್ರ ಅದು ಕಣ್ಣಿಗೆ ಕಾಣಿಸುವ ನೇರವಾದ ಸರಳ ಗೀರು. ಆದರೆ ಅಲ್ಲಿ ಬದುಕುವ ನೆಲದವರ ಬದುಕಿನಲ್ಲಿ ಅದು ತಿರುವು, ತಲ್ಲಣ, ತುಂಡಾಗುವ ನೆನಪು. ನಿನ್ನೆಯವರೆಗೆ ಮನೆಯ ಬಾಗಿಲಿನಿಂದ ನೇರವಾಗಿ ಕಾಲಿಟ್ಟರೆ ತಲುಪುತ್ತಿದ್ದ ಹೊಲ, ಪಂಚಾಯಿತಿ ಕಟ್ಟೆ, ಗೂಡಂಗಡಿ ಗಡಂಗು,ಮೀನಿನ ಅಂಗಡಿ, ಪ್ರೈಮರಿ ಶಾಲೆ ಎಲ್ಲವೂ ಇಂದು  ಹೆದ್ದಾರಿಯ ಆ ಬದಿಯದು!        ಬೆಳಗಿನ ಜಾವ ಹಸುವನ್ನು ಬಿಟ್ಟುಕೊಂಡು, ಬೀಜದ ಮೂಟೆ ಹೆಗಲಿಗೇರಿಸಿಕೊಂಡು ನಡೆದು ಹೋಗುತ್ತಿದ್ದ ದಾರಿ ಇದ್ದಕ್ಕಿದ್ದಂತೆ ಕತ್ತರಿಸಿಬಿಟ್ಟಿದೆ.  ಅಂಡರ್‌ಪಾಸ್ ಇಲ್ಲ, ಸರ್ವಿಸ್‌ರೋಡ್ ಬಹುದೂರ. ಪರಿಣಾಮವಾಗಿ ರೈತನು ತನ್ನದೇ ಹೊಲಕ್ಕೆ ಹೋಗಲು ಮೈಲುಗಟ್ಟಲೆ ಸುತ್ತು ಹೊಡೆಯಬೇಕು. ಆ ಸುತ್ತು ಬರೀ ಕೇವಲ ದೈಹಿಕ ದೂರವಲ್ಲ; ಯಾರದೋ ಹಸು ಪೈರು ಮೇಯುತ್ತಿದ್ದರೂ ಅದನ್ನು ಓಡಿಸಲಾರದ ಸ್ಥಿತಿ. ಸಮಯದ ನಷ್ಟ, ಶ್ರಮದ ನಷ್ಟ, ಹಣದ ನಷ್ಟ. ಒಂದು ದಿನಕ್ಕೆ ಒಂದು ಗಂಟೆ ಹೆಚ್ಚಾಗಿ ನಡೆದು ಹೋಗುವುದು ಎಂದರೆ ಆ ಹೊಲಕ್ಕೆ ಕೊಡುವ ಗಮನ ಸಹಜವಾ...

ವೇದ ಪಠಣ ಕ್ರಮ.. ಲೇಖನ: ಶ್ರೀ ಶ್ರೀವತ್ಸ ಜೋಶಿ

ದಂಡಕ್ರಮ ಪಾರಾಯಣದಲ್ಲಿ ಬಣ್ಣದ ತಗಡಿನ ತುತ್ತೂರಿ... [ತಿಳಿರುತೋರಣ *  07Dec2025 * ಶ್ರೀವತ್ಸ ಜೋಶಿ] ಅದ್ಭುತವೂ ಅಸದೃಶವೂ ಆದ ವಿದ್ಯಮಾನವೊಂದು ಕಳೆದವಾರ ಕಾಶಿಯಲ್ಲಿ ಜರುಗಿದ ಸಮಾಚಾರವನ್ನು ನೀವು ಓದಿ/ಕೇಳಿಯೇ ಇರುತ್ತೀರಿ. ಅದೇ- ಮಹಾರಾಷ್ಟ್ರ ಮೂಲದ ದೇವವ್ರತ ಮಹೇಶ ರೇಖೆ ಎಂಬ 19 ವರ್ಷ ವಯಸ್ಸಿನ ನವತರುಣ ವೇದಮೂರ್ತಿಯ ದಂಡಕ್ರಮ ಪಾರಾಯಣ. ಪುಸ್ತಕದ ಸಹಾಯವಿಲ್ಲದೆ, ಕೇವಲ ಸ್ಮರಣಶಕ್ತಿಯಿಂದ ಶುಕ್ಲ ಯಜುರ್ವೇದದ ಮಾಧ್ಯಂದಿನೀಯ ಶಾಖೆಯ 2000 ಮಂತ್ರಗಳ ದಂಡಕ್ರಮ ಪಾರಾಯಣವನ್ನು ಕಾಶಿಯ ವಲ್ಲಭರಾಮ ಶಾಲಿಗ್ರಾಮ ಸಾಂಗವೇದ ವಿದ್ಯಾಲಯದಲ್ಲಿ ಅಕ್ಟೋಬರ್ 2ರಿಂದ ನವೆಂಬರ್ 30ರವರೆಗೆ ವಿದ್ವತ್‌ವರ್ಗದ ಸಮ್ಮುಖದಲ್ಲಿ ಮಾಡಿದ್ದು, 200 ವರ್ಷಗಳ ಬಳಿಕ ವಿದ್ವಾಂಸರೊಬ್ಬರು ಮಾಡಿರುವ ಸಾಧನೆ ಇದಾಗಿರುವುದು, ಪ್ರಧಾನಿ ಮೋದಿಯವರಿಂದಲೂ ಸೇರಿದಂತೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿರುವುದು, ಶೃಂಗೇರಿ ಶ್ರೀಗಳಿಂದ ಸುವರ್ಣಕಂಕಣ ಸನ್ಮಾನ ಸಂದಿರುವುದು, ಮಾಧ್ಯಮಗಳು ದೇವವ್ರತ ರೇಖೆ ಮತ್ತು ಅವರ ತಂದೆಯ ಸಂದರ್ಶನಗಳನ್ನು ಪ್ರಸಾರ ಮಾಡಿರುವುದು... ಇತ್ಯಾದಿ.  ಈ ಹಿನ್ನೆಲೆಯಲ್ಲಿ, ಸುಮಾರು 20 ವರ್ಷಗಳ ಹಿಂದೆ ನಾನು ಬರೆದಿದ್ದ ‘ವೇದಪಠನ ವಿಧಾನಗಳ ವಿಸ್ಮಯ’ ಎಂಬೊಂದು ಲೇಖನದ ಸಾರಾಂಶವನ್ನು ಮೊದಲು ನಿಮ್ಮ ಓದಿಗೆ ಒದಗಿಸುತ್ತೇನೆ. ಆಮೇಲೆ ನಿರ್ದಿಷ್ಟವಾಗಿ ದಂಡಕ್ರಮ ಪಾರಾಯಣದ ಬಗ್ಗೆಯೇ ಮತ್ತೊಂದಿಷ್ಟು ಸೋದಾಹರಣ ವಿವರಗಳನ್ನು ನೋಡೋಣವಂತೆ.  ಹದಿಮ...

ಬಯಸದೇ ಬಂದ ಹರುಷದ ಭಾಗ್ಯ.....(ಮೂಲ ಲೇಖಕ:ಆನಂದ ಗೋಖಲೆ)

ಬಯಸದೇ ಬಂದ ಹರುಷದ ಭಾಗ್ಯ ಸುಪ್ರಭಾತ.... 🙏🏼❤🙏🏼 ನಿಮಗೆ ವಿಜಯಲಕ್ಷ್ಮಿ ಸದಾ ಸರ್ವದಾ ಒಲಿಯುತ್ತಿರಲಿ.... ನಾನಿಂದು ಸ್ವಲ್ಪ ಆರಾಮವಾಗಿದ್ದೇನೆ. ಕೆಲಸದಲ್ಲಿದ್ದೇನೆ.. ನನ್ನ ಜೀವನದಲ್ಲಿ ಒಮ್ಮೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇಂದಿನ ದೃಷ್ಟಾoತ..... ವಸ್ತ್ರ ವಿನ್ಯಾಸ ತರಬೇತಿ ಪಡೆಯುತ್ತಿರುವ B. Sc. ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರ ಮನೆಯಲ್ಲಿ ಇಂದು ಅವರ ಕುಲದೇವರ ನಿತ್ಯಪೂಜೆಗೆ ಪುರುಷರಾರೂ ಇರಲಿಲ್ಲ. ಹೆಂಗಸರು ಅವರ ಮನೆಯಲ್ಲಿ ನಿತ್ಯಪೂಜೆ ಮಾಡುವಂತಿಲ್ಲ.. ಹಾಗಾಗಿ ಅವರೆಲ್ಲ ಆತಂಕದಲ್ಲಿದ್ದರು. ಅವರಿಗೆ ಹೇಗೋ ನನ್ನ ನೆನಪಾಯಿತಂತೆ. ಸಂಕೋಚದಿಂದ ನನಗೆ ಕರೆ ಮಾಡದೇ ಪರೋಕ್ಷವಾಗಿ ನಾನು ಉಳಿದು ಕೊಂಡಿದ್ದ ಮನೆಯವರಿಗೆ ಕರೆ ಮಾಡಿ ಈ ಪೂಜಾ ಕೆಲಸ ಮಾಡಿ ಕೊಡಬಹುದೇ ಎಂದು ನನ್ನ ಹೆಸರನ್ನು ಉಲ್ಲೇಖಿಸಿದರoತೆ.. ಸ್ವಲ್ಪ ದೂರದಲ್ಲಿದ್ದ ಅವರ ಮನೆಗೆ ಹೋಗಿ ಪೂಜೆ ಪೂರೈಸಿ ಬಂದೆ. ದಕ್ಷಿಣೆ ಕೊಡಲು ಬಂದರು. ಇಷ್ಟು ಸಣ್ಣ ಕೆಲಸಕ್ಕೆಲ್ಲ ದಕ್ಷಿಣೆ ಸ್ವೀಕರಿಸುವುದೇ ಎಂದು ನಯವಾಗಿ ಬೇಡ ಎಂದೆ. ಒತ್ತಾಯ ಮಾಡಿದರೂ ಸ್ವೀಕರಿಸಲಿಲ್ಲ. ಒಂದು ಅವಕಾಶ ಒದಗಿಸಿ ಕೊಟ್ಟಿದ್ದಕ್ಕೆ ನಾನೇ ಧನ್ಯವಾದ ತಿಳಿಸಿದೆ. ತಿಂಡಿ ಅವರೇ ಮಾಡಿ ಬಡಿಸಿದರು. ಧೋoಪರ್ ಪಾಪ್ಪೆ ( ಲೋಖಂಡಿ ಘಾವನ )+ ಮಾವಿನ ಮಿಡಿ ಚಟ್ನಿ.... ಸರಿಯಾಗಿ ಹೊಂದುವ ಕಾಂಬಿನೇಶನ್.. ಜೊತೆಗೆ KT. ಕಾಲೇಜು ಗೆ ಬಂದು ನನ್ನ ಚೀಲ ನೋಡಿದರೆ ಅದರಲ್ಲಿ ಒಂದು ಕವರ್ ನಲ್ಲಿ 1,000 ರೂಪಾಯಿ...

ಖಾಲಿಯಾಗುತ್ತಿರುವ ಸಮಾಜ ನೀರಸ ಜೀವನ.. ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ

*ಖಾಲಿಯಾಗುತ್ತಿರುವ ಸಮಾಜ ನೀರಸ ಜೀವನ.. ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ:* ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ. ಹೆಚ್ಚಿನ ಕುಟುಂಬಗಳಲ್ಲಿ ಗಂಡು – ಹೆಣ್ಣು ಎಂಬಂತೆ 1-2 ಮಕ್ಕಳು. ಎಲ್ಲರಿಗೂ ಬೆಂಗಳೂರಿನಲ್ಲಿ ಕೆಲಸ. ಹೆಂಡತಿ ಮಕ್ಕಳೊಂದಿಗೆ ಅಲ್ಲೇ ಸಂಸಾರ. ದೊಡ್ಡ ಆಸ್ತಿ, ದೊಡ್ಡ ಮನೆ ನೋಡಿಕೊಂಡು 60-70 ದಾಟಿರುವ ವೃದ್ಧ ಅಪ್ಪ –ಅಮ್ಮಂದಿರು ಮಾತ್ರ ಹಳ್ಳಿಯಲ್ಲಿದ್ದಾರೆ. ಅವರಿಗೆ ಕೂಡುವುದಿಲ್ಲ. ಕೆಲಸ ಮಾಡಲು ಶಕ್ತಿಯಿಲ್ಲ. ಕೃಷಿ – ಬೇಸಾಯಕ್ಕೆ ಕೂಲಿ ಕೆಲಸಗಾರರು ಸಿಗುವುದಿಲ್ಲ. ತೋಟ, ಗದ್ದೆ ಎಲ್ಲಾ ಹಾಳು. ತರಕಾರಿಗಳು ಬೆಳೆಯುತ್ತಿಲ್ಲ. ಹಪ್ಪಳ-ಉಪ್ಪಿನಕಾಯಿ ಮಾಡುವವರಿಲ್ಲ. ಎಲ್ಲರೂ ಪೇಟೆಯಲ್ಲಿರುವ ಕಾರಣ ಹಳ್ಳಿಯ ಶಾಲೆಗಳಲ್ಲಿ ಮಕ್ಕಳಿಲ್ಲ. ಮದುವೆ- ಉಪನಯನಕ್ಕೆ ಪುರ್ರೆಂದು ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲಿ ಹಾರಿ ಬರುತ್ತಾರೆ. ಊಟ ಮಾಡಿ ಕೈ ತೊಳೆದು ತಿರುಗಿ ನೋಡಿದಾಗ ಮತ್ತೆ ಬೆಂಗಳೂರಿಗೆ ಹೊರಡಲು ಕಾರು ಸ್ಟಾರ್ಟ್ ಆಗಿದೆ. ಸಂಬಂಧಗಳು ಕಳಚಿಕೊಳ್ಳುತ್ತಿವೆ. ಹೆತ್ತ ಕರುಳಿಗೆ ಮಕ್ಕಳನ್ನು, ಮೊಮ್ಮಕ್ಕಳನ್ನು ಮುದ್ದಿಸುವ, ಆಲಿಂಗಿಸುವ ಅವಕಾಶವಿಲ್ಲ, ಉದ್ಯೋಗದಲ್ಲಿರುವ ಮಕ್ಕಳಿಗೆ ಸ್ವಲ್ಪವೂ ಸಮಯವಿಲ್ಲ. ಹಳ್ಳಿಯ ಶಾಲೆಗಳಲ್ಲಿ ಸ್ಕೂಲ್ ಡೇ ಗೆ ಜನರಿಲ್ಲ. ರಾಮನವಮಿಯಾಗಲಿ, ಗಣೇಶೋತ್ಸವವಾಗಲಿ, ಸ್ವಾತಂತ್ರ್ಯ ದಿನಾಚರಣೆಯಾಗಲಿ, ಮೆರವಣಿಗೆ ಹೋಗಲು ಹಳ್ಳಿಗಳಲ್ಲಿ ಮಕ್ಕಳಿಲ್ಲ. ವೃದ್ಧ ಅಜ್ಜಂದಿರಿಗೆ ನಡೆಯಲು ಆಗುವುದಿಲ್ಲ. ಒಳ್ಳೆ...

ಚಿತ್ಪಾವನಿ ಭಾಷೆ... ಚಿದಂಬರ ಕಾಕತ್ಕರ್ ಅವರ ಲೇಖನ

ಚಿತ್ಪಾವನಿಯನ್ನು ಅನುನಾಸಿಕ  ಮತ್ತು ವಿಶಿಷ್ಟ ಉಚ್ಚಾರಗಳ ಸಹಿತ ಬರೆಯಲು ಆಗುತ್ತದೆ. ಇಲ್ಲಿ ನಾನು ಬರೆದುದನ್ನು ಓದಿ. ಯಾವುದನ್ನು ಹೇಗೆ ಬರೆಯಬೇಕು, ಹೇಗೆ ಬರೆದುದನ್ನು ಹೇಗೆ ಓದಬೇಕು ಎಂದು ಅದರಲ್ಲೇ ಇದೆ.  ******* ಮಾಗ್ಗಾಂಠಿಂ ದಕ್ಷಿಣಕನ್ನಡಾಂತ್ಲಿಂ ಚಿತ್ಪಾವನಂ ಸೋಹೆರೆ ದಾಹೆರೆಂಸಮ ಪತ್ರ ವ್ಯವಹಾರು, ದಿನಚರಿ ಲ್ಯಹವ್ವೆಚಿ, ಲೆಕ್ಖಪತ್ರಂ ಠೆವ್ವೆಚಿಂ, ಹೆಂ ಆವ್ಘಂ ಕಾನ್ನಡ್ಯಾ ಭಾಸ್ಸಾಂತು ಕರೀತ ಆಯ್ಲಿಂಥ್ಸತಿ. ಹೀಂ ಕಾಮ್ಮಂ ಕನ್ನಡ ನಾಹಿಂತೆ ದೇವನಾಗರಿ ಲಿಪಿಂತು ಆಮ್ಚಾ ಭಾಸ್ಸಾ ಕರ್ತಿಂತೆ ಆಮ್ಧಾ ಮಸ್ತ ಜ್ಸುನ್ನೆ ಶಬ್ದ ಅನಿಕ ತೆಂತ್ಸೊ ಉಚ್ಚಾರು ಲಿಖಿತ ರೂಪಾಂತು ಲಭ್ಯ ಹಂತೊ. ಆಮ್ಚ್ಯಾ ಭಾಸ್ಸಾಲಾ ಸ್ವಂತ ಲಿಪಿ ನಾಹಿಂ ಮ್ಹಣಿ ಥೊಡ್ಸೆಂತ್ಸೆ ಮನಾಂತು ಹೀನ ಭಾವನಾ ಥ್ಸೆ. ಪಣ ಹೇಲಾ ಅರ್ಥು ನಾಹಿಂ.  ಸ್ವಂತ ಲಿಪಿ ನತ್ಲೆಲ್ಯೊ ವೆಗ್ಗಳ್ಯೊ ನಾವಾಂಜೀಸ ಭಾಸ್ಸೊ ಮಸ್ತ ಥ್ಸತಿ.  ಇಂಗ್ಲೀಷ ಲ್ಯಹವ್ವೆತ್ಸಂ ರೋಮನ್ ಲಿಪ್ಯಾಂತು, ಹಿಂದಿ ದೇವನಾಗರೀಂತು. ಸ್ವಂತ ಲಿಪಿ ಥ್ಸವೆತ್ಸೆಲಾನಿ ಭಾಸ್ಸಾಚ್ಯಾ  ಸಮೃದ್ಧಿಲಾ ಸಂಬಂಧು ನಾಹಿಂ.   ಕಾಲಾಂತರಾಂತು ಅಪರೂಪಾಲಾ ಕನ್ನಡ ಲಿಪಿಚಿಂ ಚಿತ್ಪಾವನೀ ಪುಸ್ತಕಂ ಆಯ್ಲೀಂ ಥ್ಸತೀರ ತರೀ  ಅಂತರ್ಜಾಲ ಕ್ರಾಂತಿ ಹವ್ನಿ ಸಾಮಾಜಿಕ ಜಾಲತಾಣಂ ಸಾರ್ವತ್ರಿಕ ಜ್ಸಾಲೆ ಉಪ್ರಾಂತ ಮಸ್ತ ಜನಾಂಧಾ  ಚಿತ್ಪಾವನೀಂತು ಲ್ಯಹವ್ವೆಚಿ ಹುಕ್ಕಿ ಆಯ್ಲೆಲಿ.  ಎಷ್ಯಾ...

*ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?*

(ವಾಟ್ಸಾಪ್ ನಿಂದ ಸಂಗ್ರಹಿಸಿದ್ದು)  *ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?* ಸಾಮಾನ್ಯವಾಗಿ ಕೃಷಿಕನಿಗೆ ಬೆಳಗ್ಗಿನ ಹೊತ್ತು ತುರ್ತು ಕೆಲಸಗಳಿರುತ್ತವೆ. ಆ ಕಾರಣದಿಂದ ಪೇಟೆಯ ಕೆಲಸಕ್ಕಾಗಿ ಮನೆ ಬಿಡುವಾಗಲೇ ಗಂಟೆ 10 ಆಗುವುದು ಸಾಮಾನ್ಯ. ಹಾಗಾಗಿ ಪೇಟೆ ಜೀವನದ ಬೆಳಗ್ಗಿನ ಚಟುವಟಿಕೆಯ ಅರಿವು ಹೆಚ್ಚಿನ ಕೃಷಿಕರಿಗೆ ಇರುವುದಿಲ್ಲ.ಕೆಲವು ತಿಂಗಳ ಹಿಂದೆ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಅನಿವಾರ್ಯವಾಗಿ ಒಂದು ವಾರ ಕಾಲ ಪುತ್ತೂರು ಮೂಲಕ ಉಪ್ಪಿನಂಗಡಿಯವರೆಗೆ ಪ್ರಯಾಣಿಸಬೇಕಾಗಿತ್ತು. ದಾರಿ ಉದ್ದಕ್ಕೂ ಶಾಲಾ ಬಸ್ಸುಗಳ ಭರಾಟೆ ಕಂಡು ನನಗೆ ಆಶ್ಚರ್ಯ ಮತ್ತು ಕುತೂಹಲ ಎರಡೂ ಉಂಟಾಯಿತು. ಬಸ್ಸುಗಳ ಮೇಲೆ ಶಾಲೆಯ ಹೆಸರು ಮತ್ತು ಊರು ಇದ್ದ ಕಾರಣ ಯಾವೂರಿನ ಬಸ್ ಎಂದು ಸುಲಭದಲ್ಲಿ ಪತ್ತೆ ಹಚ್ಚುವಂತಾಯಿತು. ಸುಮಾರು 20 ಕಿಲೋ ಮೀಟರ್ ಆಸು ಪಾಸುಗಳಿಂದ ಪುತ್ತೂರು ಬಸ್ಸು ಆ ಊರಿಗೂ ಆ ಊರು ಬಸ್ಸು ಪುತ್ತೂರಿಗೂ ಬರುವುದನ್ನು ಕಂಡು ಆಶ್ಚರ್ಯ ಚಕಿತನಾಗಿದ್ದೆ. ಎಲ್ಲಾ ಶಾಲೆಗಳಲ್ಲಿಯೂ ಒಂದೇ ತರದ ಸರಕಾರಿ ಶಿಕ್ಷಣ ಪದ್ಧತಿಯನ್ನು ಕಲಿಸುವಾಗ, ಅಷ್ಟಷ್ಟು ದೂರದ ಪ್ರಯಾಣವನ್ನು ಮಕ್ಕಳ ಮೇಲೆ ಹೇರುವುದು ಯಾಕಾಗಿ ಎಂದು ನನಗೆ ಈವರೆಗೂ ಗೊತ್ತಾಗಿಲ್ಲ.  ನಾನೆಲ್ಲಿಯೋ ಕೇಳಿದ ಮನೋವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಮಕ್ಕಳಿಗೆ ಪ್ರಾಪಂಚಿಕ ಅರಿವು ಬರುವುದು 12 ವರ್ಷದ ಪ್ರಾಯದವರೆಗಂತೆ. ಆ ಪ್ರಾಯದಲ್ಲಿ ನೋಡಿ,ಮಾಡಿ, ಕೇಳಿ ಕಲಿತ ವಿದ್ಯೆಗ...