ಬಯಸದೇ ಬಂದ ಹರುಷದ ಭಾಗ್ಯ.....(ಮೂಲ ಲೇಖಕ:ಆನಂದ ಗೋಖಲೆ)
ಬಯಸದೇ ಬಂದ ಹರುಷದ ಭಾಗ್ಯ
ಸುಪ್ರಭಾತ.... 🙏🏼❤🙏🏼ನಿಮಗೆ ವಿಜಯಲಕ್ಷ್ಮಿ ಸದಾ ಸರ್ವದಾ ಒಲಿಯುತ್ತಿರಲಿ....
ನಾನಿಂದು ಸ್ವಲ್ಪ ಆರಾಮವಾಗಿದ್ದೇನೆ. ಕೆಲಸದಲ್ಲಿದ್ದೇನೆ..
ನನ್ನ ಜೀವನದಲ್ಲಿ ಒಮ್ಮೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇಂದಿನ ದೃಷ್ಟಾoತ.....
ವಸ್ತ್ರ ವಿನ್ಯಾಸ ತರಬೇತಿ ಪಡೆಯುತ್ತಿರುವ B. Sc. ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರ ಮನೆಯಲ್ಲಿ ಇಂದು ಅವರ ಕುಲದೇವರ ನಿತ್ಯಪೂಜೆಗೆ ಪುರುಷರಾರೂ ಇರಲಿಲ್ಲ. ಹೆಂಗಸರು ಅವರ ಮನೆಯಲ್ಲಿ ನಿತ್ಯಪೂಜೆ ಮಾಡುವಂತಿಲ್ಲ.. ಹಾಗಾಗಿ ಅವರೆಲ್ಲ ಆತಂಕದಲ್ಲಿದ್ದರು. ಅವರಿಗೆ ಹೇಗೋ ನನ್ನ ನೆನಪಾಯಿತಂತೆ. ಸಂಕೋಚದಿಂದ ನನಗೆ ಕರೆ ಮಾಡದೇ ಪರೋಕ್ಷವಾಗಿ ನಾನು ಉಳಿದು ಕೊಂಡಿದ್ದ ಮನೆಯವರಿಗೆ ಕರೆ ಮಾಡಿ ಈ ಪೂಜಾ ಕೆಲಸ ಮಾಡಿ ಕೊಡಬಹುದೇ ಎಂದು ನನ್ನ ಹೆಸರನ್ನು ಉಲ್ಲೇಖಿಸಿದರoತೆ.. ಸ್ವಲ್ಪ ದೂರದಲ್ಲಿದ್ದ ಅವರ ಮನೆಗೆ ಹೋಗಿ ಪೂಜೆ ಪೂರೈಸಿ ಬಂದೆ. ದಕ್ಷಿಣೆ ಕೊಡಲು ಬಂದರು. ಇಷ್ಟು ಸಣ್ಣ ಕೆಲಸಕ್ಕೆಲ್ಲ ದಕ್ಷಿಣೆ ಸ್ವೀಕರಿಸುವುದೇ ಎಂದು ನಯವಾಗಿ ಬೇಡ ಎಂದೆ. ಒತ್ತಾಯ ಮಾಡಿದರೂ ಸ್ವೀಕರಿಸಲಿಲ್ಲ. ಒಂದು ಅವಕಾಶ ಒದಗಿಸಿ ಕೊಟ್ಟಿದ್ದಕ್ಕೆ ನಾನೇ ಧನ್ಯವಾದ ತಿಳಿಸಿದೆ. ತಿಂಡಿ ಅವರೇ ಮಾಡಿ ಬಡಿಸಿದರು. ಧೋoಪರ್ ಪಾಪ್ಪೆ ( ಲೋಖಂಡಿ ಘಾವನ )+ ಮಾವಿನ ಮಿಡಿ ಚಟ್ನಿ.... ಸರಿಯಾಗಿ ಹೊಂದುವ ಕಾಂಬಿನೇಶನ್.. ಜೊತೆಗೆ KT. ಕಾಲೇಜು ಗೆ ಬಂದು ನನ್ನ ಚೀಲ ನೋಡಿದರೆ ಅದರಲ್ಲಿ ಒಂದು ಕವರ್ ನಲ್ಲಿ 1,000 ರೂಪಾಯಿ ಮತ್ತೆ ಒಂದು ಕಾಗದ ಬರೆದಿದ್ದರು. ಕಾಗದ ಓದುತ್ತಿದ್ದಂತೆ ಕಣ್ಣಾಲಿಗಳು ಒದ್ದೆಯಾಗಿ ಸದ್ದಿಲ್ಲದೆ ಕಣ್ಣೀರ ಹನಿಗಳು ಕಪೋಲಗಳ ಮೇಲೆ ಅನುಮತಿ ಇಲ್ಲದೇ ಮೆರವಣಿಗೆಯಲ್ಲಿ ಸಾಗತೊಡಗಿದವು... ಯಾರೋ ಏನೋ...? ನಾನು ಮಾಡಿದ ಒಂದು ಗಂಟೆಯ ಸಣ್ಣ ಕೆಲಸಕ್ಕೆ ಇಷ್ಟೊಂದು ಪ್ರತಿಫಲವೇ... ಅಂತ ಅನಿಸಿ ಯಾಕೋ ಮನಸ್ಸು ಭಾವುಕಗೊಂಡು.... ನಿಮ್ಮೆಲ್ಲರ ನೆನಪುಗಳು ಒತ್ತರಿಸಿ ಬರತೊಡಗಿತು. ( ನನ್ನನ್ನು ಪ್ರೀತಿಸಿದವರು, ದ್ವೇಷಿಸಿದವರು, ನನ್ನ ಬಗ್ಗೆ ಅಪಪ್ರಚಾರ ಮಾಡಿ ತೇಜೋವಧೆ ಮಾಡಿದವರು... ನನ್ನ ಕಣ್ಣುಗಳಲ್ಲಿ ನೀರು ತರಿಸಿದವರು.. ಇವರ ನೆನಪು ಕೂಡ ಬಂದು ಮನಸ್ಸು ಮುದುಡಿತು.) ಜೀವನ ಒಂದು ವಿಚಿತ್ರ ವಿಶ್ವವಿದ್ಯಾಲಯ ಅಂತ ಅನಿಸಿತು. ಹೆಜ್ಜೆ ಹೆಜ್ಜೆಗೂ ನಾವು ಕಲಿಯುವ ಪಾಠಗಳು, ನೈತಿಕ ಮೌಲ್ಯಗಳು... ಒಂದೇ ಎರಡೇ..
ಶುಭವಾಗಲಿ.... 🌹🌹🌹
... ಆನಂದ ಗೋಖಲೆ. ಖ್ಯಾತ ವಸ್ತ್ರವಿನ್ಯಾಸಕಾರ
Comments
Post a Comment