ಮಾತಿನ ಬೆಲೆ...
ಒಂದು ಕಥೆ.....
ಅದು ತುಂಬಾನೇ ಚಳಿಯ ರಾತ್ರಿ, ಕೋಟ್ಯಾಧಿಪತಿಯೊಬ್ಬ ಹೀಗೆ ಹೊರಗಡೆ ಬಂದಿದ್ದ, ಬೀದಿ ಬದಿ ಕುಳಿತಿದ್ದ ಒಬ್ಬ ಮುದುಕುನನ್ನು ಕಂಡು ಮಾತಾಡಿಸಿದ " ನೀನು ಯಾವುದೇ ಬೆಚ್ಚನೆಯ ಹೊದಿಕೆಯಿಲ್ಲದೇ ಕುಳಿತಿರುವೆ ನಿನಗೆ ಚಳಿ ಆಗುತ್ತಿಲ್ಲವೇ ?"
ಅ ಮುಪ್ಪು ಮುದುಕ ಉತ್ತರಿಸಿದ " ನನ್ನ ಹತ್ತಿರ ಹೊದಿಕೆಯೇನು ಇಲ್ಲ ಇದನ್ನು ನಾನು ದಿನನಿತ್ಯ ಅನುಭವಿಸುತ್ತೇನೆ, ನನಗೀಗ ಅಭ್ಯಾಸವಾಗಿದೆ.
ಕೋಟ್ಯಾಧಿಪತಿ : ಇರು ನಾನು ಈಗಲೇ ಬಂಗಲೆಗೆ ಹೋಗಿ ನಿನಗೊಂದು ಬೆಚ್ಚಗಿರುವ ಉಣ್ಣೆಯ ಶಾಲು ತಂದುಕೊಡುತ್ತೇನೆ.
ಮನೆಗೆ ಹೋದ ಆ ಶ್ರೀಮಂತ ವ್ಯಕ್ತಿ ತನ್ನ ಕೆಲಸ ಕಾರ್ಯಗಳಲ್ಲಿ ಮಘ್ನನಾಗಿ ಆ ಬಡವನನ್ನು ಮರೆತಿದ್ದ.
ಬೆಳಗಾಯಿತು... ಆ ಶ್ರೀಮಂತನಿಗೆ ಬಡವನ ನೆನಪಾಯಿತು ತನ್ನ ಕೆಲಸಗಳನ್ನು ಬಿಟ್ಟು ತಕ್ಷಣ ಆ ಬಡವನನ್ನ ಹುಡುಕುತ್ತಾ ಹೊರಟ ಅತೀವ ಚಳಿಯ ಕಾರಣದಿಂದ ಆ ಮುಪ್ಪು ಮುದುಕ ಕುಳಿತ ಜಾಗದಲ್ಲೇ ಮೃತನಾಗಿದ್ದ.
ಆದರೆ ಆ ಬಡವ ತನ್ನ ಕೈಯಲ್ಲಿ ಆತನಿಗಾಗಿ ಒಂದು ಪತ್ರವನ್ನು ಬರೆದಿಟ್ಟಿದ್ದ ಅದರಲ್ಲಿ ಹೀಗೆ ಬರೆದಿದ್ದ...
ನನ್ನ ಹತ್ತಿರ ಯಾವುದೇ ಬೆಚ್ಚನೆಯ ಹೊದಿಕೆ ಇಲ್ಲದಿದ್ದಾಗ ಚಳಿಯೊಂದಿಗೆ ಮುಖಾಮುಖಿಯಾಗಿ ಎದುರುಗೊಳ್ಳುವ ಮಾನಸಿಕ ಶಕ್ತಿ ಇತ್ತು, ಅದರೆ ನೀವು ಯವಾಗ ನನಗೆ ಬೆಚ್ಚನೆಯ ಹೊದಿಕೆ ಕೊಟ್ಟು ಸಹಾಯ ಮಾಡುವ ಆಸೆ ಹುಟ್ಟಿಸಿದಿರೋ ಆಗ ನನ್ನ ಮನಸ್ಸು ವಿಚಲಿತವಾಗಿ ಚಳಿಯ ಜೊತೆ ಹೋರಾಡುವ ಮನಃಶಕ್ತಿ ಕಳೆದುಹೋಯಿತು ಹಾಗಾಗಿ ನಾನು ಶವವಾದೆ.....
ನೀವು ಕೊಟ್ಟ ಮಾತು ಉಳಿಸಿಕೊಳ್ಳಲಾಗದಿದ್ದರೆ, ಯಾರಿಗೂ ಮಾತು ಕೊಡಬೇಡಿ. ಅ ಮಾತು ನಿಮಗೆ ಕೇವಲ ಮಾತು ಮಾತ್ರ, ಅದೇ ಮಾತು ಕೆಲವರಿಗೆ ಪ್ರಾಣವೆಂದು ಮರೆಯಬೇಡಿ.
ಈಗ ಹೋದ ಕಾಲ ಮರಳುವುದಿಲ್ಲ, ಮಾತು ಕೊಡುವ ಮುಂಚೆ ಆ ಮಾತಿಗೆ ನಾವು ಬದ್ಧರಿದ್ದೆವೋ ಇಲ್ಲವೋ ಯೋಚಿಸಿ ಮಾತು ಕೊಡಿ.
========ವಾಟ್ಸಾಪ್ ಕೃಪೆ ==========
Comments
Post a Comment