Posts

Showing posts from 2022

*ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?*

(ವಾಟ್ಸಾಪ್ ನಿಂದ ಸಂಗ್ರಹಿಸಿದ್ದು)  *ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?* ಸಾಮಾನ್ಯವಾಗಿ ಕೃಷಿಕನಿಗೆ ಬೆಳಗ್ಗಿನ ಹೊತ್ತು ತುರ್ತು ಕೆಲಸಗಳಿರುತ್ತವೆ. ಆ ಕಾರಣದಿಂದ ಪೇಟೆಯ ಕೆಲಸಕ್ಕಾಗಿ ಮನೆ ಬಿಡುವಾಗಲೇ ಗಂಟೆ 10 ಆಗುವುದು ಸಾಮಾನ್ಯ. ಹಾಗಾಗಿ ಪೇಟೆ ಜೀವನದ ಬೆಳಗ್ಗಿನ ಚಟುವಟಿಕೆಯ ಅರಿವು ಹೆಚ್ಚಿನ ಕೃಷಿಕರಿಗೆ ಇರುವುದಿಲ್ಲ.ಕೆಲವು ತಿಂಗಳ ಹಿಂದೆ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಅನಿವಾರ್ಯವಾಗಿ ಒಂದು ವಾರ ಕಾಲ ಪುತ್ತೂರು ಮೂಲಕ ಉಪ್ಪಿನಂಗಡಿಯವರೆಗೆ ಪ್ರಯಾಣಿಸಬೇಕಾಗಿತ್ತು. ದಾರಿ ಉದ್ದಕ್ಕೂ ಶಾಲಾ ಬಸ್ಸುಗಳ ಭರಾಟೆ ಕಂಡು ನನಗೆ ಆಶ್ಚರ್ಯ ಮತ್ತು ಕುತೂಹಲ ಎರಡೂ ಉಂಟಾಯಿತು. ಬಸ್ಸುಗಳ ಮೇಲೆ ಶಾಲೆಯ ಹೆಸರು ಮತ್ತು ಊರು ಇದ್ದ ಕಾರಣ ಯಾವೂರಿನ ಬಸ್ ಎಂದು ಸುಲಭದಲ್ಲಿ ಪತ್ತೆ ಹಚ್ಚುವಂತಾಯಿತು. ಸುಮಾರು 20 ಕಿಲೋ ಮೀಟರ್ ಆಸು ಪಾಸುಗಳಿಂದ ಪುತ್ತೂರು ಬಸ್ಸು ಆ ಊರಿಗೂ ಆ ಊರು ಬಸ್ಸು ಪುತ್ತೂರಿಗೂ ಬರುವುದನ್ನು ಕಂಡು ಆಶ್ಚರ್ಯ ಚಕಿತನಾಗಿದ್ದೆ. ಎಲ್ಲಾ ಶಾಲೆಗಳಲ್ಲಿಯೂ ಒಂದೇ ತರದ ಸರಕಾರಿ ಶಿಕ್ಷಣ ಪದ್ಧತಿಯನ್ನು ಕಲಿಸುವಾಗ, ಅಷ್ಟಷ್ಟು ದೂರದ ಪ್ರಯಾಣವನ್ನು ಮಕ್ಕಳ ಮೇಲೆ ಹೇರುವುದು ಯಾಕಾಗಿ ಎಂದು ನನಗೆ ಈವರೆಗೂ ಗೊತ್ತಾಗಿಲ್ಲ.  ನಾನೆಲ್ಲಿಯೋ ಕೇಳಿದ ಮನೋವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಮಕ್ಕಳಿಗೆ ಪ್ರಾಪಂಚಿಕ ಅರಿವು ಬರುವುದು 12 ವರ್ಷದ ಪ್ರಾಯದವರೆಗಂತೆ. ಆ ಪ್ರಾಯದಲ್ಲಿ ನೋಡಿ,ಮಾಡಿ, ಕೇಳಿ ಕಲಿತ ವಿದ್ಯೆಗ...

Live Rich and Don't Die Rich

Most of the Indian Senior Citizens die rich but they do not live rich. The younger generation is moving away from Real Estate, whereas the Seniors are still engrossed emotionally in Real Estate. The Seniors have built houses not only for themselves but also for their children, and even for those who have settled abroad or outside their home state. The next generation is least interested in these houses. They have no time to look at these gigantic properties. The next generation is very asset light. One such Senior Citizen died at the age of eighty five. His wife had already passed away a few years ago. One son lives in London and the other one lives in New Zealand. They have the nationality of those countries. Neither was interested in the house their father had built when they were younger. The father had written a Will before his death to divide all the property equally between his two children. The sons did not have the time or the inclination to get the property transferred in thei...

ಸಂಬಂಧಗಳ ಯುಗ

*ಸಂಬಂಧಗಳ ಯುಗ* ಇದು  SSC ವರೆಗೆ ಒಂದೇ ಶಾಲೆಯಲ್ಲಿ ಓದಿದ ಶಾಲೆಯ ನಾಲ್ವರು ಆತ್ಮೀಯ ಸ್ನೇಹಿತರ ಕಥೆ. ಆಗ ನಗರದಲ್ಲಿ ಒಂದೇ ಒಂದು ಐಷಾರಾಮಿ ಹೋಟೆಲ್ ಇತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಆ ಹೋಟೆಲ್‌ಗೆ ಹೋಗಿ ಚಹಾ ಮತ್ತು ತಿಂಡಿ ತಿನ್ನೋಣ ಎಂದು ನಿರ್ಧರಿಸಿದರು. ನಾಲ್ವರಿಂದ ನಲವತ್ತು ರೂಪಾಯಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಅದೊಂದು ಭಾನುವಾರವಾದ್ದರಿಂದ ನಾಲ್ವರೂ ಸೈಕಲ್ ಹತ್ತಿ ಹತ್ತೂವರೆ ಗಂಟೆಗೆ ಹೋಟೆಲ್ ತಲುಪಿದರು. ದಿನೇಶ್, ಸಂತೋಷ್, ಮನೀಶ್, ಮತ್ತು ಪ್ರವೀಣ್ ತಿಂಡಿ ಮತ್ತು ಚಹಾ ಸೇವಿಸುತ್ತಾ ಮಾತನಾಡತೊಡಗಿದರು. ನಾಲ್ವರೂ 40 ವರ್ಷಗಳ ನಂತರ ಅದೇ ಹೋಟೆಲ್‌ನಲ್ಲಿ ಏಪ್ರಿಲ್ 1 ರಂದು ಮತ್ತೆ ಭೇಟಿಯಾಗಲು ಸರ್ವಾನುಮತದಿಂದ ನಿರ್ಧರಿಸಿದರು. "ಅಲ್ಲಿಯವರೆಗೆ ನಾವೆಲ್ಲರೂ ತುಂಬಾ ಶ್ರಮಿಸಬೇಕು, 40 ವರ್ಷಗಳ ನಂತರ ಎಷ್ಟು ಪ್ರಗತಿ ಸಾಧಿಸಲಾಗಿದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ" ಎಂದು ಅವರು ಚರ್ಚಿಸಿದರು. ಅಂದು ಕೊನೆಯವನಾಗಿ  ಹೋಟೆಲ್ ತಲುಪುವವನು  ಆ ದಿನದ ಬಿಲ್ ನ್ನು ಪಾವತಿಸಬೇಕು ಎಂದು ನಿರ್ಧರಿಸಿದರು.       ಇವರಿಗೆ ಟೀ, ತಿಂಡಿ ಬಡಿಸಿದ ಮಾಣಿ ಕಾಳು ಇದನ್ನೆಲ್ಲ ಕೇಳುತ್ತಿದ್ದ. ಅಲ್ಲಿಯವರೆಗೆ ಇಲ್ಲೇ ಇದ್ದರೆ ನಿಮ್ಮೆಲ್ಲರಿಗಾಗಿ ನಾನು ಕಾಯುತ್ತಿರುತ್ತೇನೆ ಎಂದರು. ಮುಂದಿನ ಶಿಕ್ಷಣಕ್ಕಾಗಿ ನಾಲ್ವರೂ ಬೇರೆಯಾದರು.     ದಿನೇಶ್ ತನ್ನ ತಂದೆ ಸ್ಥಳಾಂತರಗೊಂಡ ನಂತ...

ಮಾತಿನ ಬೆಲೆ...

ಒಂದು ಕಥೆ..... ಅದು ತುಂಬಾನೇ ಚಳಿಯ ರಾತ್ರಿ, ಕೋಟ್ಯಾಧಿಪತಿಯೊಬ್ಬ ಹೀಗೆ ಹೊರಗಡೆ ಬಂದಿದ್ದ, ಬೀದಿ ಬದಿ ಕುಳಿತಿದ್ದ ಒಬ್ಬ ಮುದುಕುನನ್ನು ಕಂಡು ಮಾತಾಡಿಸಿದ " ನೀನು ಯಾವುದೇ ಬೆಚ್ಚನೆಯ ಹೊದಿಕೆಯಿಲ್ಲದೇ ಕುಳಿತಿರುವೆ ನಿನಗೆ ಚಳಿ ಆಗುತ್ತಿಲ್ಲವೇ ?" ಅ ಮುಪ್ಪು ಮುದುಕ ಉತ್ತರಿಸಿದ " ನನ್ನ ಹತ್ತಿರ ಹೊದಿಕೆಯೇನು ಇಲ್ಲ ಇದನ್ನು ನಾನು ದಿನನಿತ್ಯ ಅನುಭವಿಸುತ್ತೇನೆ, ನನಗೀಗ ಅಭ್ಯಾಸವಾಗಿದೆ. ಕೋಟ್ಯಾಧಿಪತಿ : ಇರು ನಾನು ಈಗಲೇ ಬಂಗಲೆಗೆ ಹೋಗಿ ನಿನಗೊಂದು ಬೆಚ್ಚಗಿರುವ ಉಣ್ಣೆಯ ಶಾಲು ತಂದುಕೊಡುತ್ತೇನೆ.  ಮನೆಗೆ ಹೋದ ಆ ಶ್ರೀಮಂತ ವ್ಯಕ್ತಿ ತನ್ನ ಕೆಲಸ ಕಾರ್ಯಗಳಲ್ಲಿ ಮಘ್ನನಾಗಿ ಆ ಬಡವನನ್ನು ಮರೆತಿದ್ದ. ಬೆಳಗಾಯಿತು... ಆ ಶ್ರೀಮಂತನಿಗೆ ಬಡವನ ನೆನಪಾಯಿತು ತನ್ನ ಕೆಲಸಗಳನ್ನು ಬಿಟ್ಟು ತಕ್ಷಣ ಆ ಬಡವನನ್ನ ಹುಡುಕುತ್ತಾ ಹೊರಟ ಅತೀವ ಚಳಿಯ ಕಾರಣದಿಂದ ಆ ಮುಪ್ಪು ಮುದುಕ ಕುಳಿತ ಜಾಗದಲ್ಲೇ ಮೃತನಾಗಿದ್ದ.  ಆದರೆ ಆ ಬಡವ ತನ್ನ ಕೈಯಲ್ಲಿ ಆತನಿಗಾಗಿ ಒಂದು ಪತ್ರವನ್ನು ಬರೆದಿಟ್ಟಿದ್ದ ಅದರಲ್ಲಿ ಹೀಗೆ ಬರೆದಿದ್ದ... ನನ್ನ ಹತ್ತಿರ ಯಾವುದೇ ಬೆಚ್ಚನೆಯ ಹೊದಿಕೆ ಇಲ್ಲದಿದ್ದಾಗ ಚಳಿಯೊಂದಿಗೆ ಮುಖಾಮುಖಿಯಾಗಿ ಎದುರುಗೊಳ್ಳುವ ಮಾನಸಿಕ ಶಕ್ತಿ ಇತ್ತು, ಅದರೆ ನೀವು ಯವಾಗ ನನಗೆ ಬೆಚ್ಚನೆಯ ಹೊದಿಕೆ ಕೊಟ್ಟು ಸಹಾಯ ಮಾಡುವ ಆಸೆ‌ ಹುಟ್ಟಿಸಿದಿರೋ ಆಗ ನನ್ನ ಮನಸ್ಸು ವಿಚಲಿತವಾಗಿ ಚಳಿಯ ಜೊತೆ ಹೋರಾಡುವ ಮನಃಶಕ್ತಿ ಕಳೆದುಹೋಯಿತು ಹಾಗಾಗಿ ನಾನು ಶವವ...