ಸಮಯದ ಅರಿವು
****
*ಆ ನಾಲ್ಕನೇ ವ್ಯಕ್ತಿ.*
ಆ ನಾಲ್ವರು ಮತ್ತು ಡ್ರೈವರ್ ನ್ನು ಹೊತ್ತ ಕಾರು
ಡೆಲ್ಲಿಯತ್ತ ಸಾಗುತ್ತಿತ್ತು. ಆ ನಾಲ್ವರು ಒಂದು ಮೀಟಿಂಗ್ ಗೆ ಹಾಜರಾಗಬೇಕಿತ್ತು. ಆದರೆ ಕಾರಿನ ಒಂದು ಟಯರ್ ಪಂಕ್ಚರ್ ಆಗಿಹೋಯಿತು. ಎಲ್ಲರೂ ಕಾರಿನಿಂದ ಇಳಿದು ನಿಂತರು; ಡ್ರೈವರ್ ಸ್ಟೆಪ್ನಿ ಟಯರ್ ಜೋಡಿಸಲು ಉದ್ಯುಕ್ತನಾದ.
ಇಳಿದು ನಿಂತವರಲ್ಲಿ ಒಬ್ಬ ಸಿಗರೇಟು ಹಚ್ಚಿ ಕೊಂಡು ಸ್ವಲ್ಪ ದೂರ ಹೋಗಿನಿಂತ. ಇನ್ನೊಬ್ಬ ತನ್ನ ಸೆಲ್ ಫೋ಼ನ್ ತೆಗೆದು ಮಾತಾಡುತ್ತಾ ನಿಂತ. ಮತ್ತೊಬ್ಬ ತನ್ನ ಫ಼್ಲಾಸ್ಕ್ ನಿಂದ ಕಾಫಿ಼ ಬಗ್ಗಿಸಿಕೊಂಡು ನಿಧಾನವಾಗಿ ಸವಿಯುತ್ತಾ ನಿಂತ.
ಎರಡು ನಿಮಿಷ ಕಳೆದ ಮೇಲೆ 'ನಮ್ಮ ನಾಲ್ಕನೆ ಯವನೆಲ್ಲಿ' ಎಂದು ಎಲ್ಲರೂ ಹುಡುಕಲು ಶುರುಮಾಡಿದರು. ಆಗ ತಿಳಿಯಿತು, ಆ ನಾಲ್ಕನೆಯವನು ತನ್ನ ಕೋಟು ಕಳಚಿ ಕಾರಿನಲ್ಲಿ ಹಾಕಿ ಷರ್ಟ್ ನ ತೋಳುಗಳನ್ನು ಮೊಳಕೈಯಿಂದ ಮೇಲಿನವರೆಗೂ ಸುತ್ತಿ, ಟೈಯನ್ನೂ ಭುಜದ ಮೇಲಿಂದ ಹಿಂದಕ್ಕೆ ಹಾಕಿ ಡ್ರೈವರ್ ಜೊತೆ ಕುಳಿತು ಕಾರಿಗೆ ಜಾಕ್ ಹಾಕಿ ಮೇಲೆತ್ತಲು ಸಹಾಯಕನಾಗಿ ಕೂತಿದ್ದ!!
ಈ ಮೂರುಜನರಿಗೂ ದಿಗ್ಭ್ರಮೆ. "ಏನ್ಸಾರ್. ನೀವು? ಡ್ರೈವರ್ ಗೆ ಸಹಾಯಕರಾಗಿ?" ಎಂದು ಕಸಿವಿಸಿ ಪಟ್ಟರು.
ಆಗ ಆ ನಾಲ್ಕನೆಯ ವ್ಯಕ್ತಿ ಹೇಳಿದರು
"ಡ್ರೈವರ್ ಒಬ್ಬನೇ ಮಾಡಬೇಕೆಂದರೆ ಹದಿನೈದು ನಿಮಿಷವಾದರೂ ಬೇಕು. ನಾನೂ ಸಹಾಯ ಮಾಡಿದರೆ ಅವನು ಎಂಟು ನಿಮಿಷದಲ್ಲಿ ಟೈರ್ ಬದಲಾಯಿಸಿ ಹೊರಡಲು ಸಾಧ್ಯ. ಇದರಿಂದ ನಮಗೆ ಏಳು ನಿಮಿಷ ಉಳಿಯುತ್ತಲ್ಲ?"
ಆ ನಾಲ್ಕನೇ ವ್ಯಕ್ತಿಯ ಹೆಸರು ರತನ್ ಟಾಟಾ!!!!
ಮುಂದೆ ಅವರ ಕಂಪೆನಿ ಬೃಹತ್ತಾಗಿ ಬೆಳೆದು ಉತ್ತಮ ಹೆಸರು ಗಳಿಸಲು ಸಾಧ್ಯವಾಗಿದ್ದು ಅವರು ಸಮಯಕ್ಕೆ ಕೊಡುವ ಈ ಪ್ರಾಮುಖ್ಯತೆಯಿಂದಾಗಿ. 'Respect to Time is Respect to Life' ಎನ್ನುವುದು ಅವರ ಧ್ಯೇಯವಾಕ್ಯವಾಗಿತ್ತು. ಅವರ ಎಲ್ಲಾ ಸಹೋದ್ಯೋಗಿಗಳದೂ ಸಹ.
ರತನ್ ಅವರ ಬದುಕಾದರೂ ಹೇಗಿತ್ತು?
ಬಾಲ್ಯದಲ್ಲೇ ಅವರ ತಂದೆ ತಾಯಿಗಳಿಬ್ಬರೂ ಬೇರೆ ಬೇರೆಯಾದರು. ಮಗು ರತನ್ ಅಜ್ಜಿಯ ಆಸರೆಯಲ್ಲೇ ಬೆಳೆಯಿತು.
ಯೌವನದಲ್ಲಿ ಅವರು ಪ್ರೀತಿಸಿದ ಗರ್ಲ್ ಫ್ರೆ಼ಂಡ್ ಕೈಕೊಟ್ಟು ಓಡಿಹೋದಳು. ನಂತರ ಅವರ ಕಂಪೆನಿ ವಿಪರೀತ ನಷ್ಟವನ್ನನುಭವಿಸಬೇಕಾಗಿ ಬಂದು ಹಿಂದೆಂದೂ ಕಾಣದಂಥ ಸಮಸ್ಯೆಗಳನ್ನು ಎದುರಿಸಬೇಕಾಯಿತು.
ಆದರೆ ಇವೆಲ್ಲದರ ನಡುವೆಯೂ ರತನ್ ತಮ್ಮ ಸದ್ವರ್ತನೆಯನ್ನಾಗಲೀ, ದಯೆ-ಸಹಾನುಭೂತಿ, ನ್ಯಾಯಪರತೆ, ಸಮಯಪಾಲನೆ, ಕ್ರಮಶಿಕ್ಷಣ, ಕಠೋರ ಪರಿಶ್ರಮಗಳನ್ನಾಗಲೀ ಎಂದೂ ಮರೆಯಲಿಲ್ಲ. ಅವರ ಸಂಸ್ಥೆ TATA GROUP ಬೃಹತ್ ಸಂಸ್ಥೆ ಯಾಗಲು ಅವರ ಈ ಸದ್ಗುಣಗಳೇ ಕಾರಣ. ಆ ಸಂಸ್ಥೆ ಇಂದು ಎಷ್ಟು ಬೃಹತ್ತಾಗಿ ಬೆಳೆದಿದೆಯೆಂದರೆ:
ಟಾಟಾ ಸಂಸ್ಥೆಯ ಒಂದು ಶಾಖೆಯಾದ TCS ಒಂದರ ಶೇರ್ ವ್ಯಾಲ್ಯೂ ಪಾಕೀಸ್ತಾನದ ಒಟ್ಟೂ ಸ್ಟಾಕ್ ಮಾರ್ಕೆಟ್ ನ ವ್ಯಾಲ್ಯೂಗೆ ಸಮ!!
ಭಾರತದ GDP ಗೆ ಟಾಟಾ ಸಂಸ್ಥೆ ಯೊಂದೇ 4% ಕಾಂಟ್ರಿಬ್ಯೂಟ್ ಮಾಡುತ್ತಿದೆ.
ಪ್ರತಿ ಸಂವತ್ಸರ ಅಸ್ಸಾಂ, ಓಡಿಶಾ,ಹಿಮಾಚಲ ಪ್ರದೇಶ, ಗೋವಾ ರಾಜ್ಯ ಗಳಿಂದ ಒಟ್ಟುಎಷ್ಟು Tax ಭಾರತ ಸರ್ಕಾರದ ತಿಜೋರಿಗೆ ಸಂದಾಯವಾಗುತ್ತದೋ ಅಷ್ಟು ತೆರಿಗೆಯನ್ನು ಟಾಟಾ ಸಂಸ್ಥೆ ಯೊಂದೇ ಸಲ್ಲಿಸುತ್ತದೆ.( ಸುಮಾರು 50,000 ಕೋಟಿಗಿಂತ ಹೆಚ್ಚು).
ಆದರೆ ಈ ಧನ ಸಂಪತ್ತಿಗಿಂತ ಮಿಗಿಲಾದುದು ಟಾಟಾ ಸಂಸ್ಥೆಯ ಔದಾರ್ಯ ಸಂಪತ್ತು!!!
ಒಂದು ನಿದರ್ಶನ:
ನವೆಂಬರ್26, 20008. ಯಾರೂ ಮರೆಯದಂಥಾ ದಿನ. ಪಾಕೀಸ್ತಾನದ ಉಗ್ರವಾದಿ ಸಂಘಟನೆಯಾದ ಲಷ್ಕರೆ ತೋಯ್ಬಾ ದ ಕಸಬ್ ಮೊದಲಾದ ಉಗ್ರರು ಮುಂಬೈ ನಗರದಲ್ಲಿನ ಟಾಟಾ ಸಂಸ್ಥೆಯವರ ತಾಜ್ ಹೋಟೆಲ್ ನಲ್ಲಿ ಗುಂಡಿನ ಮಳೆ ಸುರಿಸಿ ನೂರಾರು ಅಮಾಯಕ ಜನರನ್ನು ಕೊಂದ ಕರಾಳ ದಿನ ಅದು.
ಹಾಗೆ ನಿಷ್ಕಾರಣವಾಗಿ ಮಡಿದ ಪ್ರತಿಯೊಬ್ಬರ ಕುಟುಂಬದವರನ್ನೂ ವ್ಯಕ್ತಿಗತವಾಗಿ ಭೇಟಿ ಮಾಡಿ ಒಂದೊಂದು ಕುಟುಂಬಕ್ಕೂ 25 ರಿಂದ 50 ಲಕ್ಷ ರೂಪಾಯಿಗಳನ್ನು ಸಾಂತ್ವನ ಧನವಾಗಿ ನೀಡಿದರು ರತನ್ ಟಾಟಾ. ಅಷ್ಟೇ ಅಲ್ಲದೆ ಆ ದಾಳಿಯ ಸಮಯದಲ್ಲಿ ಡ್ಯೂಟಿಯ ಮೇಲಿದ್ದು ಅಸುನೀಗಿದ, ಗಾಯಗೊಂಡ ಪ್ರತಿ ಉದ್ಯೋಗಿ, ಸೆಕ್ಯೂರಿಟಿ ಮಂದಿ ಮತ್ತು ಪೋಲೀಸ್ ಸಹ ಸೇರಿದಂತೆ ತಮ್ಮ ಸಂಸ್ಥೆಯಲ್ಲಿ ಆಯಾ ಕುಟುಂಬದಲ್ಲಿನ ಒಬ್ಬರಿಗೆ ಉದ್ಯೋಗ ಕೊಟ್ಟರು. ಅಲ್ಲದೆ ಆಯಾ ಕುಟುಂಬದ ಮಕ್ಕಳ ಓದು, ಮದುವೆ ಇವುಗಳ ಜವಾಬ್ದಾರಿಯನ್ನೂ ತಾವೇ ಹೊತ್ತರು!!!
ಎಲ್ಲಕ್ಕಿಂತ ಮೆಚ್ಚಬೇಕಾದ ವಿಷಯವೊಂದಿದೆ.
ಆ ದಾಳಿಯ ಸಮಯದಲ್ಲಿ ದೇವಿಕಾ ಎನ್ನುವ ಚಿಕ್ಕ ಹುಡುಗಿಯೊಂದಿಗೆ ಅವಳ ತಂದೆ ಮತ್ತು ಸೋದರಮಾವ ಹೋಟೆಲ್ ಗೆ ಬಂದಿದ್ದರು. ಹೊರಟು ನಿಂತು ಹೊರಬಂದವರು ಆ ಹುಡುಗಿಯನ್ನು ಅಲ್ಲೇ ನಿಲ್ಲಿಸಿ ತಾವಿಬ್ಬರೂ ಟಾಯ್ಲೆಟ್ ಗೆ ಹೋಗಿಬರುವುದಾಗಿ ಹೇಳಿ ಪುನಃ ಒಳಗೆ ಹೋಗುತ್ತಾರೆ. ಇಬ್ಬರೂ ಗುಂಡಿಗೆ ಬಲಿಯಾಗಿ ಬೀಳುತ್ತಾರೆ. ಯಾಕೆ ಬರಲಿಲ್ಲ ಎಂದು ನೋಡಲು ಅವಳು ಒಳಹೊಕ್ಕಾಗ ಅವಳ ಕಣ್ಣಿಗೆ ಕಂಡಿದ್ದು ಹೆಂಗಸರು, ಮಕ್ಕಳು , ವೃದ್ಧರು ಎಂದು ನೋಡದೇ ಸ್ವೇಚ್ಛೆಯಾಗಿ ಗುಂಡಿನ ಮಳೆಗರೆಯುತ್ತಿದ್ದ ನರರೂಪದ ರಾಕ್ಷಸ ಕಸಬ್. ಅವನ ಕಣ್ಣಿಗೆ ಬೀಳದಂತೆ ಅವಿತುಕೊಂಡಿದ್ದು ಬದುಕಿ ಉಳಿದಿದ್ದೇ ಒಂದು ಪವಾಡ. ಅವಳ ಆಯಸ್ಸು ಗಟ್ಟಿ ಇತ್ತು. ( ನಂತರ ಕಸಬ್ ನನ್ನು ಗುರುತಿಸಿದ್ದೇ ಈ ಹುಡುಗಿ).
ಆ ಚಿಕ್ಕ ಹುಡುಗಿಗೆ ತಕ್ಕವೈದ್ಯೋಪಚಾರ ಕೊಡಿಸಿ ಅವಳು ಪುನಃ ಮಾನಸಿಕವಾಗಿ ಸಹಜ ಸ್ಥಿತಿಗೆ ಬಂದಮೇಲೆ ಅವಳಿಗೆ ಓದು ಮುಂದುವರೆಸಲು ಸಹಾಯ ಮಾಡಿದ್ದೇ ಅಲ್ಲದೆ ಅವಳಿಗೆ ತಮ್ಮ ಸಂಸ್ಥೆ ಯಲ್ಲಿ ಯೋಗ್ಯ ಉದ್ಯೋಗ, ಅವಳ ಮದುವೆಯ ಜವಾಬ್ದಾರಿ ಇವುಗಳನ್ನೆಲ್ಲಾ ತಾವೇ ಭರಿಸಿದರು ರತನ್ ಟಾಟಾ!!!!!
ಇನ್ನೂ ಅವರ ವಿಶಾಲ ಮನಸ್ಸು ಹೇಗಿದೆ ಎಂದರೆ ಹೋಟೆಲಿನ ಹೊರಗೆ ಫು಼ಟ್ ಪಾತ್ ಮೇಲೆ ಪಾವ್ ಭಜಿ, ಪಾನೀಪೂರಿ, ಭೇಳ್ ಪೂರಿ ಇತ್ಯಾದಿಗಳನ್ನು ಮಾರುತ್ತಿದ್ದ ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಹ, ಅವರಿಗೂ ಹೋಟೆಲ್ ಗೂ ಯಾವ ತರಹದ ಸಂಬಂಧ ಇಲ್ಲದಿದ್ದರೂ, ಅವರಿಗೇನಾದರೂ ಈ ಘಟನೆಯಿಂದ ನಷ್ಟ ಸಂಭವಿಸಿದ್ದರೆ ಅದನ್ನು ತುಂಬಿ ಕೊಡುವುದಾಗಿ ಭರವಸೆ ನೀಡಿದರು!!!!
ಇಷ್ಟೆಲ್ಲಾ ಧರ್ಮದ ಕೆಲಸ ಮಾಡಲು ಅವರು ತೆಗೆದುಕೊಂಡಿದ್ದು ಕೇವಲ 20 ದಿವಸಗಳು. ಬೇರೆ ಯಾವ ಸಹಾಯ ಸಂಘ ಸಂಸ್ಥೆಗಳೂ ಇಷ್ಟು ದೊಡ್ಡ ಪ್ರಮಾಣದ ಸಹಾಯವನ್ನು ಇಷ್ಟು ಅಲ್ಪ ಸಮಯದಲ್ಲಿ ಮಾಡಿ ಮುಗಿಸಿದ ಉಲ್ಲೇಖವಿಲ್ಲ.
ರತನ್ ರವರ ಈ ಮಹತ್ಕಾರ್ಯಗಳ ಕುರಿತು ಅವರ ಮಿತ್ರರೊಬ್ಬರು ಬರೆದಿರುವ ಈ ಮಾತುಗಳು ಬಹಳ ಸಮಂಜಸವಾಗಿವೆ:
👍" Don't mess with him ; if you give him Deep insults , he will transform them into Deep results."
'ರತನ್ ಟಾಟಾ ರನ್ನು ಹೋಲಿಸಿದರೆ ಸ್ವಾಮಿ ವಿವೇಕಾನಂದರಿಗೆ ಹೋಲಿಸಬಹುದು' ಅನ್ನುತ್ತಾರೆ ಕೆಲವರು. ಅದು ಒಂದು ಸಾಮ್ಯತೆಯಲ್ಲಿ ಸರಿ ಎನ್ನಿಸಬಹುದು.
ಇಬ್ಬರೂ ಮಹಾನ್ ವ್ಯಕ್ತಿಗಳೂ ತಮ್ಮ ಉದಾತ್ತ ಧ್ಯೇಯಗಳಿಗಾಗಿ ಪ್ರಾತಃಸ್ಮರಣೀಯರು.
ವಿವೇಕಾನಂದರು ಕಾವಿ ಧರಿಸಿ ತಮ್ಮ ಧ್ಯಾನರೂಪದಿಂದ ದೇಶಸೇವೆ ಮಾಡಿದ್ದರೆ,ರತನ್ ರವರು ಸೂಟು-ಬೂಟು ಧರಿಸಿ ತಮ್ಮ ದಾನರೂಪದಿಂದ ದೇಶಸೇವೆ ಮಾಡುತ್ತಿದ್ದಾರೆ. ಅಷ್ಟೇ ವ್ಯತ್ಯಾಸ.
**********
(ತೆಲುಗು ಮೂಲ. ಕನ್ನಡಕ್ಕೆ ಭಾವಾನುವಾದ: ಜೆ.ಬಿ.ಪ್ರಸಾದ್)
👌
ReplyDelete