ನೀವು ಎಷ್ಟು ನಡೆಯುತ್ತೀರಿ?...

ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದೆ ನಡೆಯಲು ಆರಂಭಿಸಿ. ಯಾಕೆ ಗೊತ್ತಾ?

ಆಧುನಿಕ ಕಾಲ, ಮಾಡ್ರನ್ ಸ್ಟೈಲ್ ಹೆಸರಿನಲ್ಲಿ ಮಲಗುವ ಕೋಣೆಯಲ್ಲೂ ಚಪ್ಪಲಿ ಹಾಕಿಕೊಂಡು ಓಡಾಡುವ ಕಾಲ ಇದು. ಮನೆಯಲ್ಲಿ ನುಣ್ಣಗಿನ ಪಾಲಿಶ್ ಬಂಡೆಗಳು, ಇನ್ನೂ ಸ್ಮೂತ್ ಆದ ಚಪ್ಪಲಿಗಳು. ಎಲ್ಲೂ ಪಾದಗಳಿಗೆ ಸ್ವಲ್ಪವೂ ತಗುಲುವಂತಿಲ್ಲ. ಬೆಳಗ್ಗೆ ಹಾಸಿಗೆ ಮೇಲಿಂದ ಇಳಿಯುವರಿಂದ ಆರಂಭ, ಮತ್ತೆ ರಾತ್ರಿ ಬೆಡ್ ಮೇಲೆ ಮಲಗುವವರೆಗೂ ಕಾಲುಗಳು ಮಾತ್ರ ಖಾಲಿಯಾಗಿ ಬಿಡುವ ಪರಿಸ್ಥಿತಿಯೇ ಇಲ್ಲ. ಸಾಧ್ಯವಾದರೆ ಚಪ್ಪಲಿ, ಇಲ್ಲದಿದ್ದರೆ ಸ್ಯಾಂಡಲ್ಸ್, ಅದು ತಪ್ಪಿದರೆ ಸ್ಫೋರ್ಟ್ಸ್ ಶೂಸ್... ಈ ರೀತಿ ಟೈಮ್‌ಗೆ ತಕ್ಕಂತೆ ಯಾವುದೋ ಒಂದು ಪಾದರಕ್ಷೆಗಳನ್ನು ಬಿಗಿದು ನಮ್ಮ ಪಾದಗಳನ್ನು ಮುಚ್ಚುತ್ತಿದ್ದೇವೆ.

ಇದು ಯವುದೇ ರೀತಿಯಲ್ಲೂ ಮೈಗೆ ಒಳ್ಳೆಯದು ಅಲ್ಲ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ನಮ್ಮ ಪೂರ್ವಿಕರು ನಿರಂತರ ಹಳ್ಳಕೊಳ್ಳಗಳ ರಸ್ತೆಯಲ್ಲಿ, ಹೊಲದ ಬದುಗಳ ಮೇಲೆ ತಿರುಗಿದ ಕಾರಣ ತುಂಬಾ ಆಕ್ಟೀವ್ ಆಗಿ ಇರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ಸ್ಟೈಲ್ ಹೆಸರಲ್ಲಿ ಬೆಡ್ ರೂಮಿನಲ್ಲೂ ಚಪ್ಪಲಿ ಬಳಸುತ್ತಿದ್ದಾರೆ. ಬೆಳಗ್ಗೆ ಮಂಚ ಇಳಿಯುವುದರಿಂದ ಆರಂಭವಾಗಿ ರಾತ್ರಿ ಬೆಡ್ ಹತ್ತುವವರೆಗೂ ಕಾಲುಗಳನ್ನು ಮಾತ್ರ ಖಾಲಿ ಬಿಡುವ ಪರಿಸ್ಥಿತಿ ಇಲ್ಲ.... ಪಾದಗಳನ್ನು ಖಾಲಿ ಬಿಡುತ್ತಿಲ್ಲ. ಈ ರೀತಿ ಮಾಡುವುದರಿಂದ ನಮ್ಮ ದೇಹಕ್ಕೆ ನಾವೇ ಶಿಕ್ಷೆ ವಿಧಿಸುತ್ತಿದ್ದೇವೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇನ್ನು ಮುಂದಾದರೂ ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದಂತೆ ನಡೆಯುವ ಪ್ರಯತ್ನ ಮಾಡಿ ಇಲ್ಲದಿದ್ದರೆ ನಿಮ್ಮ ಆರೋಗ್ಯ ಅಪಾಯಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸುತ್ತಿದ್ದಾರೆ ವೈದ್ಯರು.

ಆದರೆ ಇನ್ನು ಮುಂದೆ ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದೆ ನಡೆಯುವ ಪ್ರಯತ್ನ ಮಾಡಿ... ಯಾಕೆ? ಏನು? ಹೇಗೆ ಎಂಬ ಪ್ರಶ್ನೆಗಳನ್ನು ನೀವು ಕೇಳಿದರೆ? ಇಲ್ಲಿದೆ ನೋಡಿ ಉತ್ತರ.

ದೇಹದ ಭಂಗಿ ಸೂಕ್ತ ರೀತಿಯಲ್ಲಿರುತ್ತದೆ.

ಹೊಟ್ಟೆಯ ಮೇಲೆ ಒತ್ತಡ ಉಂಟಾಗಿ, ಜೀರ್ಣಕ್ರಿಯೆ ಸೂಕ್ತ ರೀತಿಯಲ್ಲಿ ನಡೆಯುತ್ತದೆ.

ಚಪ್ಪಲಿ ಇಲ್ಲದಂತೆ ನಡೆಯುವುದರಿಂದ, ಮರಳು, ಚಿಕ್ಕ ಚಿಕ್ಕ ಕಲ್ಲುಗಳು ಮೃದುವಾಗಿ ಚುಚ್ಚಿಕೊಳ್ಳುವುದರಿಂದ, ನಿಮ್ಮ ರಕ್ತದ ಒತ್ತಡ ನಿಯಂತ್ರಣದಲ್ಲಿರುತ್ತದೆ.

ಏನೋ ಹೊಸ ಸ್ಪರ್ಶವನ್ನು ಪಾದಗಳು ಪಡೆಯುವುದರಿಂದ ಮೈಂಡ್ ರಿಲ್ಯಾಕ್ಸ್ ಆಗುತ್ತದೆ.

ರಕ್ತ ಸಂಚಲನೆ ವ್ಯವಸ್ಥೆ ಕ್ರಿಯೆ ಉತ್ತಮಗೊಳ್ಳುತ್ತದೆ.

ಸಹನೆ ಹೆಚ್ಚುತ್ತದೆ.

ಮಾನವನ ಪಾದಗಳಲ್ಲಿ 72 ಸಾವಿರ ನರಗಳ ತುದಿ ಇರುತ್ತದೆ. ಹೆಚ್ಚು ಹೊತ್ತು ಪಾದರಕ್ಷೆಗಳನ್ನು ಬಳಸುವುದರಿಂದ ಸೂಕ್ಷ್ಮವಾದ ಈ ನರಗಳು ಸಂವೇದನೆಯನ್ನು ಕಳೆದುಕೊಳ್ಳುತ್ತವೆ. ಚಪ್ಪಲಿ ಇಲ್ಲದಂತೆ ನಡೆಯುವುದರಿಂದ ಆಕ್ಟೀವ್ ಆಗಿ ಇರುತ್ತದೆ.

ಆದಕಾರಣ ಇನ್ನು ಮುಂದೆ... ಪಾರ್ಕ್‌ಗಳಲ್ಲಿ, ಕಚೇರಿಯಲ್ಲಿ, ಮನೆಯಲ್ಲಿ ಚಪ್ಪಲಿ ಇಲ್ಲದಂತೆ ನಡೆಯುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ. ಆರೋಗ್ಯವಾಗಿ ಇರಿ.

ಯಾವ ವಯಸ್ಸಿನವರು ಎಷ್ಟು ನಡೆಯಬೇಕು:

40 ವರ್ಷಗಳು ಮತ್ತು ಅದಕ್ಕಿಂತಲೂ ಕಡಿಮೆ ವಯಸ್ಸುಳ್ಳವರು ಪ್ರತಿ ದಿನ ಕನಿಷ್ಠ 3.75 ಕಿ.ಮೀ ನಡೆಯಬೇಕು.

40 ರಿಂದ 45 ವರ್ಷದವರು ಪ್ರತಿ ದಿನ ಕನಿಷ್ಠ 3.5 ಕಿ.ಮೀ ನಡೆಯಬೇಕು

45 ರಿಂದ 50 ವರ್ಷದವರು ಪ್ರತಿ ದಿನ ಕನಿಷ್ಠ 3.3 ಕಿ.ಮೀ ನಡೆಯಬೇಕು

50 ರಿಂದ 55 ವರ್ಷದವರು ಪ್ರತಿ ದಿನ ಕನಿಷ್ಠ 3.1 ಕಿ.ಮೀ ನಡೆಯಬೇಕು

55 ರಿಂದ 60 ವರ್ಷದವರು ಪ್ರತಿ ದಿನ ಕನಿಷ್ಠ 2.8 ಕಿ.ಮೀ ನಡೆಯಬೇಕು

60 ವರ್ಷಗಳು ಮತ್ತು ಅದಕ್ಕಿಂತಲೂ ಹೆಚ್ಚು ವಯಸ್ಸಾದವರು ಪ್ರತಿ ದಿನ ಕನಿಷ್ಠ 2.5 ಕಿ.ಮೀ ನಡೆಯಬೇಕು.

ಒಂದು ಸಮೀಕ್ಷೆ ಪ್ರಕಾರ ಯಾರು ಪ್ರತಿ ವಾರ ಕನಿಷ್ಠ 2 ಗಂಟೆ ಯಾರು ನಡೆಯುತ್ತಾರೋ, ಆತ ಶೇ.40ಕ್ಕಿಂತಲೂ ಹೆಚ್ಚಿನವರಿಗಿಂತ ಆರೋಗ್ಯವಾಗಿ ಮತ್ತು ಕಾಯಿಲೆ ಬರದಂತೆ ಇರುತ್ತಾನೆ. ನಿತ್ಯ ವಾಕಿಂಗ್ ಮಾಡುವುದರಿಂದ ಕೊಬ್ಬು ಕರಗುತ್ತದೆ. ನಮ್ಮ ರಕ್ತದ ಒತ್ತಡ ಸಹ ನಿಯಂತ್ರಣದಲ್ಲಿರುತ್ತದೆ. ನಿತ್ಯ ನಡೆದಾಡುವುದರಿಂದ ಮಧುಮೇಹ ಬಾರದಂತೆ ಇರುತ್ತದೆ. ನಿತ್ಯ ವಾಕಿಂಗ್ ಮತ್ತು ವ್ಯಾಯಾಮ ಮಾಡಿದರೆ ಹಾರ್ಟ್ ಅಟ್ಯಾಕ್‌ನಂತಹವು ಅಷ್ಟಾಗಿ ಬರಲ್ಲ.
---------------------------//-----------------------
(ವಾಟ್ಸಾಪ್ ನಿಂದ ಬಂದ ಹಾಗೆ.....)

Comments

Popular posts from this blog

Father is Great

ಬಯಸದೇ ಬಂದ ಹರುಷದ ಭಾಗ್ಯ.....(ಮೂಲ ಲೇಖಕ:ಆನಂದ ಗೋಖಲೆ)

Human's Happiness