A story with a Moral
*ವಿಶ್ವಾಸ*
ಪಂಡಿತರೊಬ್ಬರು ಬಹಳ ಓದಿಕೊಂಡಿದ್ದರು. ಅವರಿಗೊಮ್ಮೆ ತೆಂಗಿನೆಣ್ಣೆ ಬೇಕಾಯಿತು. ಪಂಡಿತರು ಯಾವಾಗಲೂ ಹೋಗುವ ಎಣ್ಣೆ ಮಾಡುವ ಗಾಣದವನ ಪ್ರಾಮಾಣಿಕತೆ ಹೆಸರುವಾಸಿಯಾಗಿತ್ತು.
ಪಂಡಿತರು ಗಾಣದವನ ಮನೆಯ ಅಂಗಳಕ್ಕೆ ಬಂದಾಗ ಗಾಣದವನಿರಲಿಲ್ಲ. ಆದರೆ, ಗಾಣಕ್ಕೆ ಕಟ್ಟಿದ ಎತ್ತು ಅದರಷ್ಟ ಕ್ಕೆ ಸುತುತ್ತಿತ್ತು. ಯಾರ ಆದೇಶವೂ ಇಲ್ಲದೆ ಅದು ಅದರಷ್ಟಕ್ಕೇ ಸುತ್ತುತ್ತಿರುವುದನ್ನು ನೋಡಿ ಪಂಡಿತರಿಗೆ ಅಚ್ಚರಿ ಎನಿಸಿತು. ಎತ್ತಿನ ಕತ್ತಿಗೆ ಕಟ್ಟಿದ ಗಂಟೆ ಢಣ ಢಣ ಎಂದು ಸದ್ದು ಮಾಡುತ್ತಿತ್ತು. ಅತ್ತಿತ ನೋಡಿದರು, ಎತ್ತಿನ ಒಡೆಯ ಕಾಣಲಿಲ್ಲ. ಪಂಡಿತರು ಒಂದೆರಡು ಬಾರಿ ಹೆಸರೆತ್ತಿ ಹೆಸರೆತ್ತಿ ಕರೆದರು. ಸ್ವಲ್ಪ ದೂರದಲ್ಲಿ ಬೇರೇನೋ ಕೆಲಸದಲ್ಲಿ ನಿರತನಾಗಿದ್ದ ಗಾಣದವನು ಓಡಿ ಬಂದು, 'ಸ್ವಾಮಿ ನೀವು ಬಂದದ್ದು ಗೊತ್ತಾಗಲೇ ಇಲ್ಲ ದೊರದಲಿದ್ದೆ. ಎಷ್ಟು ಎಣ್ಣೆ ಬೇಕು ಹೇಳಿ.' ಎಂದು ಕೇಳಿದ.
ಎಣ್ಣೆ ಎಷ್ಟು ಬೇಕೆಂದು ಹೇಳಿ,
ಮೊದಲು ನಿನಗೊಂದು ಮಾತು ಕೇಳುವೆ ಉತ್ತರಿಸುವಿಯಾ? ಎಂದರು ಪಂಡಿತರು. ಗಾಣದವನು ತಾವು ಪಂಡಿತರು ತಾವು ನನ್ನಲ್ಲಿ ಪ್ರಶ್ನಿಸುವುದೇ? ಎಂದ ವಿನೀತನಾಗಿ.
ಪಂಡಿತರು ನೀನಿಲ್ಲದಿರುವಾಗ ಎತ್ತು ಸರಿಯಾಗಿ ಗಾಣವನ್ನು ತಿರುಗಿಸುತ್ತಿದೆ ಎಂದು ನಿನಗೆ ಹೇಗೆ ಗೊತ್ತಾಗುತ್ತದೆ? ಎಂದು ಕೇಳಿದರು.
ಗೊತ್ತಾಗುತ್ತದೇ. ಏನು ಸ್ವಾಮೀ ಆದರ ಕೊರಳ ಗಂಟೆ ಸದ್ದು ಮಾಡುವುದಿಲ್ಲವೆ? ಅದು ಸದ್ದು ಮಾಡುತ್ತಿದ್ದರೆ ಗಾಣ ಸುತ್ತು ತಿರುಗುತ್ತಿದೆ ಎಂದು ಅರ್ಥ. ಶಬ್ದ ನಿಂತರೆ ಎತ್ತು ನಿಂತಿದೆ ಎಂದರ್ಥ. ನಾನು ಬೇರೆ ಕೆಲಸ ಮಾಡುತ್ತಿರುತ್ತೇನೆ. ಅದು ಅದರ ಪಾಡಿಗೆ ಕೆಲಸ ಮಾಡುತ್ತದೆ ಎಂದುತ್ತರಿಸಿದ.
ಇರಬಹುದು, ಆದರೆ ಅದು ನಿಂತ ಕಡೆಯೇ ತಲೆಯಲ್ಲಾಡಿಸುತ್ತಿದ್ದರೂ ಗಂಟೆಯ ಶಬ್ದವಾಗುತ್ತದಲ್ಲ? ನಿನಗೆ ಮೋಸ ಮಾಡುವ ಉದ್ದೇಶದಿಂದಲ್ಲ ಅದಕ್ಕೆ ಸುಸ್ತಾಗಿರಬಹುದು. ಆಗ ನಿಂತಲ್ಲಯೇ ತಲೆಯಲ್ಲಾಡಿಸಬಹುದು. ನೀನಂತೂ ಎತ್ತು ಚಲಸುತ್ತಲೇ ಇದೆ ಎಂದು ನಂಬಿಬಿಡುತ್ತೀ ತಾನೆ ಎಂದು ಪ್ರಶ್ನಿಸಿದರು.
ಗಾಣದವನು ಪ್ರೀತಿಯಿಂದ ಎತ್ತಿನ ಮೈಯನ್ನು ಸವರುತ್ತ ಹೇಳಿದ. ಸ್ವಾಮಿ, ನಾನೂ ಓದಿಲ್ಲ ಈ ಎತ್ತೂ ಓದಿಲ್ಲ. ಹಾಗಾಗಿ ಮೋಸ ಮಾಡುವ ಬುದ್ದಿವಂತಿಕೆಯೂ ನಮಗಿಲ್ಲ. ಒಂದು ವೇಳೆ ಸುಸ್ತಾದರೆ ಆ ಎತ್ತು ಸುಮ್ಮನೆ ನಿಂತು ಬಿಡುತ್ತದೆ ಅಷ್ಟೇ. ಕೊರಳನ್ನು ಆಲ್ಲಾಡಿಸಿ ಶಬ್ದ ಹೊರಡಿಸುವಂಥಹ ಮೋಸವನ್ನು ಮಾಡಲಾರದು. ಇಷ್ಟಕ್ಕೂ ಪರಸ್ಪರ ವಿಶ್ವಾಸದಿಂದಲೇ ಈ ಜಗತ್ತು ನಡೆಯುವುದು ತಾನೆ? ವಿಶ್ವಾಸವಿಲ್ಲದಿದ್ದರೆ ಏನಿದೆ ಸ್ವಾಮಿ ? ಎಂದು ಮುಗ್ದವಾಗಿ ನಕ್ಕ.
*****
Comments
Post a Comment