ಸಮಯದ ಅರಿವು
**** *ಆ ನಾಲ್ಕನೇ ವ್ಯಕ್ತಿ.* ಆ ನಾಲ್ವರು ಮತ್ತು ಡ್ರೈವರ್ ನ್ನು ಹೊತ್ತ ಕಾರು ಡೆಲ್ಲಿಯತ್ತ ಸಾಗುತ್ತಿತ್ತು. ಆ ನಾಲ್ವರು ಒಂದು ಮೀಟಿಂಗ್ ಗೆ ಹಾಜರಾಗಬೇಕಿತ್ತು. ಆದರೆ ಕಾರಿನ ಒಂದು ಟಯರ್ ಪಂಕ್ಚರ್ ಆಗಿಹೋಯಿತು. ಎಲ್ಲರೂ ಕಾರಿನಿಂದ ಇಳಿದು ನಿಂತರು; ಡ್ರೈವರ್ ಸ್ಟೆಪ್ನಿ ಟಯರ್ ಜೋಡಿಸಲು ಉದ್ಯುಕ್ತನಾದ. ಇಳಿದು ನಿಂತವರಲ್ಲಿ ಒಬ್ಬ ಸಿಗರೇಟು ಹಚ್ಚಿ ಕೊಂಡು ಸ್ವಲ್ಪ ದೂರ ಹೋಗಿನಿಂತ. ಇನ್ನೊಬ್ಬ ತನ್ನ ಸೆಲ್ ಫೋ಼ನ್ ತೆಗೆದು ಮಾತಾಡುತ್ತಾ ನಿಂತ. ಮತ್ತೊಬ್ಬ ತನ್ನ ಫ಼್ಲಾಸ್ಕ್ ನಿಂದ ಕಾಫಿ಼ ಬಗ್ಗಿಸಿಕೊಂಡು ನಿಧಾನವಾಗಿ ಸವಿಯುತ್ತಾ ನಿಂತ. ಎರಡು ನಿಮಿಷ ಕಳೆದ ಮೇಲೆ 'ನಮ್ಮ ನಾಲ್ಕನೆ ಯವನೆಲ್ಲಿ' ಎಂದು ಎಲ್ಲರೂ ಹುಡುಕಲು ಶುರುಮಾಡಿದರು. ಆಗ ತಿಳಿಯಿತು, ಆ ನಾಲ್ಕನೆಯವನು ತನ್ನ ಕೋಟು ಕಳಚಿ ಕಾರಿನಲ್ಲಿ ಹಾಕಿ ಷರ್ಟ್ ನ ತೋಳುಗಳನ್ನು ಮೊಳಕೈಯಿಂದ ಮೇಲಿನವರೆಗೂ ಸುತ್ತಿ, ಟೈಯನ್ನೂ ಭುಜದ ಮೇಲಿಂದ ಹಿಂದಕ್ಕೆ ಹಾಕಿ ಡ್ರೈವರ್ ಜೊತೆ ಕುಳಿತು ಕಾರಿಗೆ ಜಾಕ್ ಹಾಕಿ ಮೇಲೆತ್ತಲು ಸಹಾಯಕನಾಗಿ ಕೂತಿದ್ದ!! ಈ ಮೂರುಜನರಿಗೂ ದಿಗ್ಭ್ರಮೆ. "ಏನ್ಸಾರ್. ನೀವು? ಡ್ರೈವರ್ ಗೆ ಸಹಾಯಕರಾಗಿ?" ಎಂದು ಕಸಿವಿಸಿ ಪಟ್ಟರು. ಆಗ ಆ ನಾಲ್ಕನೆಯ ವ್ಯಕ್ತಿ ಹೇಳಿದರು "ಡ್ರೈವರ್ ಒಬ್ಬನೇ ಮಾಡಬೇಕೆಂದರೆ ಹದಿನೈದು ನಿಮಿಷವಾದರೂ ಬೇಕು. ನಾನೂ ಸಹಾಯ ಮಾಡಿದರೆ ಅವನು ಎಂಟು ನಿಮಿಷ...